ಜಯಂತಿಯವರು (೧೯೪೫-೨೦೨೧) ಕನ್ನಡ ಚಿತ್ರರಂಗದ ಪ್ರಮುಖ ನಾಯಕ ನಟಿಯಲ್ಲಿ ಒಬ್ಬರು. ಒಟ್ಟು ಆರು ಭಾಷೆಯ ಸಿನೆಮಾಗಳಲ್ಲಿ ಅಭಿನಯಿಸಿರುವ ಜಯಂತಿ ಕನ್ನಡದ ೧೯೦ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ೧೯೬೮ರಲ್ಲಿ ತೆರೆ ಕಂಡ ವೈ.ಅರ್. ಸ್ವಾಮಿ ನಿರ್ದೇಶನದ ಜೇನು ಗೂಡು ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಜಯಂತಿಯವರ ಮೂಲ ಹೆಸರು ''ಕಮಲ ಕುಮಾರಿ.'' ಅದಕ್ಕಿಂತ ಮುನ್ನ ''ಜಗದೇಕ ವೀರನ ಕಥೆ'' ಚಿತ್ರದಲ್ಲಿ ಸಣ್ಣ ಪಾತ್ರವೊಂದರಲ್ಲಿ ಅಭಿನಯಿಸಿದ್ದರು. ನಿರ್ಮಾಪಕಿಯೂ ನಿರ್ದೇಶಕಿಯೂ ಆಗಿರುವ ಇವರು ೧೯೬೫ರ ''ಮಿಸ್ ಲೀಲಾವತಿ'' ಚಿತ್ರದಲ್ಲಿನ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. 'ಎರಡು ಮುಖ'(೧೯೬೯), 'ಮನಸ್ಸಿನಂತೆ ಮಾಂಗಲ್ಯ'(೧೯೭೬), 'ಧರ್ಮ ದಾರಿ ತಪ್ಪಿತು'(೧೯೮೧), 'ಮಸಣದ ಹೂವು' (೧೯೮೫), 'ಆನಂದ್'(೧೯೮೬) ಚಿತ್ರಗಳಲ್ಲಿನ ಅಭಿನಯಕ್ಕಾಗಿ ಐದು ಬಾರಿ ರಾಜ್ಯ ಪ್ರಶಸ್ತಿ ಗಳಿಸಿದ್ದಾರೆ. ಎಡಕಲ್ಲು ಗುಡ್ಡದ ಮೇಲೆ ಚಿತ್ರದಲ್ಲಿ ಜಯಂತಿಯವರು ವಿಶಿಷ್ಟ ಅಭಿನಯ ನೀಡಿದ್ದಾರೆ. == ಜಯಂತಿ ಅಭಿನಯದ ಕೆಲವು ಚಿತ್ರಗಳು == ==== ಕನ್ನಡ ==== ==== ತೆಲುಗು ==== ==== ತಮಿಳು ==== ==== ಮಲಯಾಳಂ ==== ==== ಹಿಂದಿ ==== == ನಿಧನ == ೭೬ ವರ್ಷ ವಯಸ್ಸಿನ ಜಯಂತಿಯವರು ತಮ್ಮ ಬೆಂಗಳೂರಿನ ನಿವಾಸದಲ್ಲಿ ಸೋಮವಾರ, ೨೬ಜುಲೈ೨೦೨೧ ರಂದು ನಿಧನರಾದರು. ಸ್ವಲ್ಪದಿನಗಳಿಂದ ಅವರು ಅಸ್ವಸ್ಥತೆಯಿಂದ ಬಳಲುತ್ತಿದ್ದರು. == ಹೆಚ್ಚಿನ ಮಾಹಿತಿ == ಜಯಂತಿ ಸಂದರ್ಶನ;;ಎರಡು ಜಡೆ ಕಮಲಕುಮಾರಿ ಜಯಂತಿ ಆದ ಕತೆ;ಪ್ರಜಾವಾಣಿ;: 06 ಫೆಬ್ರವರಿ 2019 == ಉಲ್ಲೇಖಗಳು ==